ಹಳೇಕೋಟೆ ಗ್ರಾಮ
ಸಿರುಗುಪ್ಪ ತಾಲೂಕಿನ ಹಳೇಕೋಟೆ ಗ್ರಾಮವು ಒಂದು ಪ್ರಮುಖ ಐತಿಹಾಸಿಕ ಸ್ಥಳವಾಗಿದೆ. ಈ ಗ್ರಾಮದಲ್ಲಿ ಸಾಕಷ್ಟು ಐತಿಹಾಸಿಕ ಸ್ಮಾರಕಗಳಿವೆ. ಅವುಗಳಲ್ಲಿ ಮುಖ್ಯವಾಗಿ ಶಾಸನಗಳು, ವೀರಗಲ್ಲುಗಳು, ಮಾಸ್ತಿಕಲ್ಲುಗಳು ಇತ್ಯಾದಿಗಳಾಗಿವೆ. ಇಲ್ಲಿನ ಸ್ಥಳೀಯರು ಹೆಚ್ಚಿನ ಮಟ್ಟದಲ್ಲಿ ಸ್ಮಾರಕಗಳ ಸಂರಕ್ಷಣೆಗೆ ಮುಂದಾಗಿದ್ದಾರೆ ಆದರೆ ಎರಕಲ್ಲು ರಸ್ತೆಯಲ್ಲಿ ಮಾತ್ರ ಒಂದು ವೀರಮಾಸ್ತಿಗಲ್ಲು ಅನಾಥವಾಗಿ ಚರಂಡಿ ಪಕ್ಕದಲ್ಲಿಯೇ ಬಿದ್ದು ವೇದನೆಯನ್ನ ಅನುಭವಿಸುತ್ತಿತ್ತು. ಇಲ್ಲಿನ ಸ್ಥಳೀಯರ ಪ್ರಕಾರ ಇನ್ನೂ ಎರಡು ಇಂತಹುದೇ ಕಲ್ಲುಗಳು ಇದ್ದವು ಆದರೆ ಕೆಲದಿನಗಳ ಹಿಂದಿನಿಂದ ಅವು ಕಾಣೆಯಾಗಿವೆ ಎಂದು ಹೇಳಿಕೆ ನೀಡಿದರು. ಆ ಕಾರಣದಿಂದ ಇಲ್ಲಿನ ಸ್ನೇಹಿತರಾದ ಬಜ್ಜಪ್ಪ ಮತ್ತು ಶಿವಕುಮಾರ್ ರವರ ಸಹಾಯದಿಂದ ಅಲ್ಲಿನ ಸ್ಥಳೀಯರೊಡನೆ ಭೇಟಿ ಮಾಡಿ ಚರಂಡಿಯೊಡನೆ ಬೆರೆಯುವ ಸ್ಥಿತಿಯಲ್ಲಿದ್ದ ವೀರಮಾಸ್ತಿಗಲ್ಲನ್ನು ಸತತ ಪ್ರಯತ್ನದಿಂದ ರಸ್ತೆಯ ಮೇಲೆ ತಂದಿರಿಸಿ ಪ್ರತಿಷ್ಟಾಪಿಸಲಾಯಿತು. ಈ ಕಾರ್ಯದಲ್ಲಿ ನೆರೆಮನೆಯವರು ತುಂಬಾ ಸಹಕಾರ ನೀಡಿದರು ಅದರ ಜೊತೆಗೆ ತುಂಬಾ ಶ್ರಮಿಸಬೇಕಾಯಿತು.
ಮುಖ್ಯವಾಗಿ ಈ ವೀರಮಾಸ್ತಿಗಲ್ಲು ಎಂದರೆ ಹೋರಾಟದಲ್ಲಿ ವೀರ ಮರಣ ಹೊಂದಿದಂತಹ ವೀರನ ಶವದ ದಹನ ಕ್ರಿಯೆಯಲ್ಲಿ ಆತನ ಪತ್ನಿ ಮುತೈದೆತನವನ್ನ ಮೆರೆದು ತನ್ನ ಪತಿಯ ಚಿತೆಯೊಡನೆ ಅಗ್ನಿಗೆ ಆಹುತಿಯಾಗಿರುವ ಪ್ರತಿರೂಪವಾಗಿ ಈ ಇಬ್ಬರನ್ನ ಬಿಂಬಿಸುವಂತೆ ಇಂತಹ ವೀರಮಾಸ್ತಿಗಲ್ಲನ್ನು ರಚಿಸಲಾಗಿರುತ್ತದೆ.
ತುಂಬಾ ತ್ಯಾಗದ ಹಿನ್ನಲೆಯನ್ನು ಒಳಗೊಂಡಂತಹ ಇಂತಹ ಸ್ಮಾರಕಗಳನ್ನ ಸಂರಿಕ್ಷಿಸುವುದು ಅನಿವಾರ್ಯ ಮತ್ತು ಅವಶ್ಯಕವಾಗಿವೆ.
ಮುಖ್ಯವಾಗಿ ಈ ಕಾರ್ಯವನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತುತ ಪಡಿಸಿರುವುದು ದೊಡ್ಡ ಸಾಧನೆ ಮಾಡಿದ್ದೇವೆಯೆಂದಲ್ಲ ಪ್ರತಿ ಗ್ರಾಮದ ನಾಗರೀಕರು ಅವಸಾನಕ್ಕೊಳಗಾದ ಸ್ಮಾರಗಳನ್ನ ರಕ್ಷಿಸುವ ಕಾರ್ಯವೂ ಹವ್ಯಾಸವಾಗಲಿ ಎಂದು ಪ್ರಸ್ತುತಪಡಿಸಲು ಬಯಸುತ್ತೇವೆ.
ಈ ಪುಟ್ಟ ಕಾರ್ಯಕ್ಕೆ ಸಹಕರಿಸಿದ ಸಹೋದರರಾದ ಪುನೀತ್ ಕುಮಾರ್, ಮುತ್ತಣ್ಣ, ಸ್ನೇಹಿತರಾದ ಬಜ್ಜಪ್ಪ ಮತ್ತು ಶಿವುಕುಮಾರ್ ಹಾಗೂ ಸ್ಥಳೀಯರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ.
Halekote village
Halekote village in Siruguppa taluk is a major historical place. There are plenty of historical monuments in this village. Most of them are inscriptions, gallstones, mastitis etc. The locals of this area have long been able to preserve the monuments, but only on a casting road, with an epidemic of orphanage, suffering from anxiety disappeared. According to locals, there were two similar stones, but few days later they were missing. Due to that, friends with Bajjappa and Shivakumar met with local residents and put them in the road to the ground with a continuous effort. In this work, the neighbors were very cooperative and had to work hard.
This epicenter was created in such a way that the heroic death of a veterinarian in his struggle with the death of his veteran in his struggle to portray his wife as a mirror of fire with her husband.
It is imperative and necessary to identify such monuments, which include a lot of sacrifice backgrounds.
The importance of presenting this work on the social networking site is not just a great achievement, but every village citizen wants to present the work of protecting the ruined memorials as a hobby.
The brothers, Puneet Kumar, assisted by this little work, thank you to Muttanna, friends Bajjappa and Sivakumar and locals.


Comments
Post a Comment