ಹಳೇಕೋಟೆ ಗ್ರಾಮ ಸಿರುಗುಪ್ಪ ತಾಲೂಕಿನ ಹಳೇಕೋಟೆ ಗ್ರಾಮವು ಒಂದು ಪ್ರಮುಖ ಐತಿಹಾಸಿಕ ಸ್ಥಳವಾಗಿದೆ. ಈ ಗ್ರಾಮದಲ್ಲಿ ಸಾಕಷ್ಟು ಐತಿಹಾಸಿಕ ಸ್ಮಾರಕಗಳಿವೆ. ಅವುಗಳಲ್ಲಿ ಮುಖ್ಯವಾಗಿ ಶಾಸನಗಳು, ವೀರಗಲ್ಲುಗಳು, ಮಾಸ್ತಿಕಲ್ಲುಗಳು ಇತ್ಯಾದಿಗಳಾಗಿವೆ. ಇಲ್ಲಿನ ಸ್ಥಳೀಯರು ಹೆಚ್ಚಿನ ಮಟ್ಟದಲ್ಲಿ ಸ್ಮಾರಕಗಳ ಸಂರಕ್ಷಣೆಗೆ ಮುಂದಾಗಿದ್ದಾರೆ ಆದರೆ ಎರಕಲ್ಲು ರಸ್ತೆಯಲ್ಲಿ ಮಾತ್ರ ಒಂದು ವೀರಮಾಸ್ತಿಗಲ್ಲು ಅನಾಥವಾಗಿ ಚರಂಡಿ ಪಕ್ಕದಲ್ಲಿಯೇ ಬಿದ್ದು ವೇದನೆಯನ್ನ ಅನುಭವಿಸುತ್ತಿತ್ತು. ಇಲ್ಲಿನ ಸ್ಥಳೀಯರ ಪ್ರಕಾರ ಇನ್ನೂ ಎರಡು ಇಂತಹುದೇ ಕಲ್ಲುಗಳು ಇದ್ದವು ಆದರೆ ಕೆಲದಿನಗಳ ಹಿಂದಿನಿಂದ ಅವು ಕಾಣೆಯಾಗಿವೆ ಎಂದು ಹೇಳಿಕೆ ನೀಡಿದರು. ಆ ಕಾರಣದಿಂದ ಇಲ್ಲಿನ ಸ್ನೇಹಿತರಾದ ಬಜ್ಜಪ್ಪ ಮತ್ತು ಶಿವಕುಮಾರ್ ರವರ ಸಹಾಯದಿಂದ ಅಲ್ಲಿನ ಸ್ಥಳೀಯರೊಡನೆ ಭೇಟಿ ಮಾಡಿ ಚರಂಡಿಯೊಡನೆ ಬೆರೆಯುವ ಸ್ಥಿತಿಯಲ್ಲಿದ್ದ ವೀರಮಾಸ್ತಿಗಲ್ಲನ್ನು ಸತತ ಪ್ರಯತ್ನದಿಂದ ರಸ್ತೆಯ ಮೇಲೆ ತಂದಿರಿಸಿ ಪ್ರತಿಷ್ಟಾಪಿಸಲಾಯಿತು. ಈ ಕಾರ್ಯದಲ್ಲಿ ನೆರೆಮನೆಯವರು ತುಂಬಾ ಸಹಕಾರ ನೀಡಿದರು ಅದರ ಜೊತೆಗೆ ತುಂಬಾ ಶ್ರಮಿಸಬೇಕಾಯಿತು. ಮುಖ್ಯವಾಗಿ ಈ ವೀರಮಾಸ್ತಿಗಲ್ಲು ಎಂದರೆ ಹೋರಾಟದಲ್ಲಿ ವೀರ ಮರಣ ಹೊಂದಿದಂತಹ ವೀರನ ಶವದ ದಹನ ಕ್ರಿಯೆಯಲ್ಲಿ ಆತನ ಪತ್ನಿ ಮುತೈದೆತನವನ್ನ ಮೆರೆದು ತನ್ನ ಪತಿಯ ಚಿತೆಯೊಡನೆ ಅಗ್ನಿಗೆ ಆಹುತಿಯಾಗಿರುವ ಪ್ರತಿರೂಪವಾಗಿ ಈ ಇಬ್ಬರನ್ನ ಬಿಂಬಿಸುವಂತೆ ಇಂ...